Discoverವಚನ ಪರಿಚಯ |Vachana Parichaya
ವಚನ ಪರಿಚಯ |Vachana Parichaya
Claim Ownership

ವಚನ ಪರಿಚಯ |Vachana Parichaya

Author: Raj Ramsagar

Subscribed: 0Played: 0
Share

Description

ಶ್ರೀ ಗುರು ಬಸವ ಲಿಂಗಾಯ ನಮಃ
ನನ್ನ ಎಲ್ಲ ಆತ್ಮೀಯರಿಗೆ "ಶರಣು ಶರಣಾರ್ಥಿ"
೧೨ನೇ ಶತಮಾನದ (ಬಸವಪೂರ್ವ , ಬಸವವೋತ್ತರ ) ಶಿವ ಶರಣರುಗಳ ಮಾತುಗಳು , ಸಿದ್ಧಾಂತಗಳು , ಜೀವನ ಅನುಭವಗಳು ವಚನಗಳ ರೂಪದಲ್ಲಿ ಹೊರಬಂದವು .ಆ ಅಧ್ಭುತ ವಚನಗಳ ಭಾವವನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಡಿದ್ದೆ ಆದಲ್ಲಿ ನಮ್ಮ ಜೀವನ ಅಚ್ಚುಕಟ್ಟಾದ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಮತ್ತು ಈ ವಾಹಿನಿಯ ಉದ್ದೇಶ ಆ ವಚನಗಳ ಭಾವವನ್ನ ಅಥವಾ ಅದರ ಸಾರವನ್ನ ನಿಮಗೆ ಸಾಧ್ಯವಾದಷ್ಟು ಅರ್ಥಮಾಡಿಸುವುದು ಮತ್ತು ಈ ಮುಖೇನ ಆ ಜೀವನದ ಮೌಲ್ಯಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ.ದಯಮಾಡಿ ನಮ್ಮ ಈ ವಾಹಿನಿಗೆ ನಿಮ್ಮ ಸಹಕಾರ ಮತ್ತು ಪ್ರೋತ್ಸಾಹವನ್ನ ನೀಡಬೇಕೆಂದು ವಿನಂತಿ .
ಇಂತಿ
ರಾಜ್ ರಾಮ್ ಸಾಗರ್
M:9986084270
29 Episodes
Reverse
ಉದಾಸೀನತೆ ಒಳ್ಳೇದಲ್ಲ. ಈ Podcast,ಮನುಷ್ಯ ತನ್ನ ಜೀವನದಲ್ಲಿ ಸಾಕಷ್ಟು ಜನರನ್ನ ಕಾಣುತ್ತಾನೆ ಆದರೆ ಒಂದಷ್ಟು ಜನರನ್ನ ಉದಾಸೀನತೆಯಿಂದ ಕಾಣುತ್ತಾನೆ ಹೀಗೆ ಮಾಡಬಾರದು ಎಂದು ತಿಳಿಸುತ್ತದೆ.
ಚಂಚಲತೆ ಜೀವನದ ಸಾಧನೆಗೆ ಅಡ್ಡಿಯಾಗುತ್ತೆ. ಈ Podcast, ಮನುಷ್ಯ ತನ್ನ ಜೀವನದಲ್ಲಿ ಇಂದಿಗೂ ಚಂಚಲತೆಗೆ ಒಳಗಾಗಬಾರದು ಯಾಕೆಂದರೆ ಚಂಚಲತೆ ಮನುಷ್ಯನನ್ನ ಯಾವ ಸಾಧನೆಯನ್ನೂ ಮಾಡೋದಕ್ಕೆ ಬಿಡುವುದಿಲ್ಲ ಬದಲಾಗಿ ವ್ಯರ್ಥ ಪ್ರಯತ್ನಗಳನ್ನ ಮಾಡಿಸುತ್ತೆ ಎಂದು ತಿಳಿಸುತ್ತದೆ.
ಇದು ಬೆರಗಾಗಿಸುವಂತಹ ಸೃಷ್ಟಿ. ಈ Podcast, ಮನುಷ್ಯ ತಾನು ತನ್ನ ಜೀವನದಲ್ಲಿ ಸಾಕಷ್ಟು ವಿಚಾರಗಳಿಗೆ ಬೆರಗಾಗುತ್ತಾನೆ ಆದರೆ ಆ ಭಗವಂತನ ಸೃಷ್ಟಿಯನ್ನ ನೋಡಿದಾಗ ಮನುಷ್ಯ ಖಂಡಿತ ಇನ್ನೂ ಬೆರಗಾಗುತ್ತಾನೆ ಮತ್ತು ಈ ಮೂಲಕ ಮನುಷ್ಯ ತನ್ನ ಜೀವನವನ್ನ ಸಾರ್ಥಕಗೊಳಿಸಿಕೊಳ್ಳುವಲ್ಲಿ ತನ್ನ ಹೆಜ್ಜೆಯನ್ನ ಇಡಬೇಕು ಎಂದು ತಿಳಿಸುತ್ತದೆ.
ಯಾರ ಸೇವೆ ? ಆ ಭಗವಂತನ ಸೇವೆ ಆಗುತ್ತದೆ. ಈ Podcast, ಮನುಷ್ಯ ತಾನು ಆ ದೇವಸ್ಥಾನದಲ್ಲಿರುವ ದೇವರಿಗೆ ಪೂಜೆ ,ಸೇವೆ ಮಾಡಿದರೆ ಮಾತ್ರ ನಿಜವಾದ ಸೇವೆ ಅಂತ ಕೆಲವರು ಭಾವಿಸಿರುತ್ತಾರೆ ಆದರೆ ಇದರ ಜೊತೆಗೆ ನಿಜವಾದ ಸೇವೆ ಅಂತ ಅಥವಾ ಪರಿಪೂರ್ಣ ಸೇವೆ ಅಂತ ಆಗೋದು ಜಂಗಮರಿಗೆ ಮಾಡಿದಾಗ ಎಂದು ತಿಳಿಸುತ್ತದೆ.
ಜ್ಞಾನವನ್ನ ಕ್ರಿಯೆಗೆ ತರಬೇಕು. ಈ Podcast, ಮನುಷ್ಯ ತಾನು ಸಾಕಷ್ಟು ವಿಷಯಗಳಲ್ಲಿ ಜ್ಞಾನವಂತನಾಗಿರುತ್ತಾನೆ ಆ ಜ್ಞಾನವನ್ನ ಇತರರಿಗೆ ಭೋದಿಸುತ್ತಾನೆ ಆದ್ರೆ ಸ್ವತಃ ತಾನೇ ಆ ಜ್ಞಾನವನ್ನ ಪಾಲಿಸುವುದಿಲ್ಲ ಇದು ತಪ್ಪು. ತಿಳಿದಂತ ಜ್ಞಾನವನ್ನ ಕ್ರಿಯೆಗೆ ತಂದರೆ ಮಾತ್ರ ಜ್ಞಾನಕ್ಕೂ ಮತ್ತು ಮನುಷ್ಯನಿಗೂ ಬೆಲೆ ಸಿಗುತ್ತೆ ಎಂದು ತಿಳಿಸುತ್ತದೆ.
ಪ್ರೀತಿಸುವ ಮತ್ತು ಎಚ್ಚರಿಸುವ ಎರಡೂ ಗುಣ ಯಾರಲ್ಲಿದೆ? ಈ Podcast,ಆ ಭಗವಂತ ಪ್ರತಿ ಜೀವಿಗಳನ್ನು ಪ್ರೀತಿಯಿಂದ ಮತ್ತು ಎಚ್ಚರಿಕೆಯಿಂದ ಕಾಯುತ್ತಿರುತ್ತಾನೆ ಮತ್ತು  ಆ ಭಗವಂತ ಮನುಷ್ಯನನ್ನ  ಪ್ರೀತಿಸುವುದರ ಮೂಲಕ ಆತನ ಜೀವನವನ್ನ ಆನಂದಮಯವಾಗಿರುವಂತೆ ಮಾಡಿದರೆ ,ಅದೇ ಮನುಷ್ಯ ಯಾವುದಾದರು ತಪ್ಪು ಮಾಡಿದಲ್ಲಿ ಎಚ್ಚರಿಕೆಯನ್ನೂ ನೀಡುತ್ತಾನೆ ಎಂದು ತಿಳಿಸುತ್ತದೆ.
ಭ್ರಮೆಯಲ್ಲಿ ಬದುಕೋದು ಬೇಡ.  ಈ Podcast, ಮನುಷ್ಯ ಯಾವತ್ತೂ ತನ್ನ ಜೀವನವನ್ನ ಭ್ರಮೆಯಲ್ಲಿ ಕಳೆಯಬಾರದು ಮತ್ತು ಭ್ರಮೆಯಿಂದ ಕೂಡಿದ ಜೀವನ ಮನುಷ್ಯನನ್ನ ಏನೂ ಸಾದಿಸೋದಕ್ಕೆ ಬಿಡೋದಿಲ್ಲ ಮತ್ತು ಸಾಧಕನನ್ನಾಗಿಸೋದಿಲ್ಲ ಬದಲಾಗಿ ಆ ಭಗವಂತ ಸದಾ ನಮ್ಮೊಟ್ಟಿಗೆ ಇದ್ದಾನೆ ಹಾಗು ಇರುತ್ತಾನೆ ಎಂದು ಭಾವಿಸಿ ಮುನ್ನಡೆಯಬೇಕು ಎಂದು ತಿಳಿಸುತ್ತದೆ.
ಈ ದೊಡ್ಡ ಶೆಟ್ಟಿನ (ಭಗವಂತ) ಯಾರೂ ಯಾಮಾರ್ಸಕಾಗಲ್ಲ.  ಈ Podcast, ಮನುಷ್ಯ ಯಾರಿಗೂ ಮೋಸಮಾಡಬಾರದು ಮತ್ತು ಮೋಸಮಾಡಿದರೆ ಅದನ್ನ ಯಾರು ನೋಡಿಲ್ಲವೆಂದು ತಿಳಿಯಬಾರದು ಯಾಕೆಂದರೆ ನಾವು ಮಾಡುವ ಅಥವಾ ಮಾಡಿರುವ ಮೋಸವನ್ನ ನಮ್ಮ ಸುತ್ತಮುತ್ತಲಿನವರು ನೋಡಿಲ್ಲವೆಂದರೂ ಮೇಲಿರುವ ಆ ದೊಡ್ಡ ಶೆಟ್ಟಿ ಅಂದರೆ ಆ ಭಗವಂತ ನೋಡುತ್ತಾನೆ ಅಥವಾ ನೋಡಿರುತ್ತಾನೆ ಮತ್ತೆ ಅದಕ್ಕೆ ತಕ್ಕ ಲೆಕ್ಕವನ್ನ ಅಂದರೆ ಪ್ರತಿಫಲವನ್ನು ನಮಗೆ ನೀಡುತ್ತಾನೆ ಎಂದು ತಿಳಿಸುತ್ತದೆ.
ರಂಗಣ್ಣನಿಗೆ ಸೋಮಣ್ಣ ಏನಂತ ಬೆದರಿಕೆ ಹಾಕಿದ? ಈ Podcast, ಮನುಷ್ಯನಿಗೆ ಹಣದ ಅಥವಾ ಯಾವುದರ ಬಗ್ಗೆಯೇ ಆಗಲಿ ಅವಶ್ಯಕತೆ ಇದ್ದಾಗ ಅದನ್ನ ಶ್ರಮಪಟ್ಟು ಪಡ್ಕೋಬೇಕೆ ವಿನಃ ಯಾವುದೇ ಬೆದರಿಕೆಯಿಂದ ಅಲ್ಲ ಎಂಬುದನ್ನ ತಿಳಿಸುತ್ತದೆ.
ರಕ್ತ ಅಲ್ಲ ಹಾಲನ್ನ ಹೀರಿಕೊಳ್ಳಿ. ಈ Podcast,ಒಂದು ಉಣ್ಣೆ ಅಂದ್ರೆ ಅದು ಒಂದು ಜಂತು ಅದು ಕೆಚ್ಚಲಲ್ಲಿ ಇದ್ದು ಹಾಲನ್ನ ಹೀರಿಕೊಳ್ಳೋ ಬದಲಾಗಿ ರಕ್ತವನ್ನ ಹೀರಿಕೊಳ್ಳುತ್ತದೆ ಅದೇ ರೀತಿ ಮನುಷ್ಯ ಬೇರೆಯವರಿಂದ ಅಂದ್ರೆ ಒಳ್ಳೆಯವರ ಜೊತೆಗಿದ್ದು ಒಳ್ಳೆಯ ಅಂಶಗಳನ್ನ ಹೀರಿಕೊಳ್ಳಬೇಕು  ಎಂದು ತಿಳಿಸುತ್ತದೆ.
ಅಹಂಲ್ಲಿ ಮೇರಿಯೊದು ಯಾಕೆ?  ಈ Podcast, ಮನುಷ್ಯ ತನ್ನ ಜೀವನದಲ್ಲಿ ಯಾವತ್ತೂ ಅಹಂ ನಿಂದ ಮೆರೀಬಾರದು ಮತ್ತು ಅಹಂ ನಿಂದ ಮೆರೆದಿದ್ದೆ ಆದಲ್ಲಿ ಆ ವ್ಯಕ್ತಿ ತನ್ನ ಜೀವನವನ್ನ ಹಾಳು ಮಾಡಿಕೊಳ್ಳುತ್ತಾನೆ ಮತ್ತು ಅಹಂಗೆ ಕಾರಣವಾಗುವಂತಹ ನಾನು, ನನ್ನದೇ, ನನ್ನಿಂದ ಮುಂತಾದ ಗುಣಗಳನ್ನ ಬಿಟ್ಟು ಜೀವನವನ್ನ ನಡೆಸಿದ್ದೆ ಆದಲ್ಲಿ ಜೀವನ ಅರ್ಥಪೂರ್ಣವಾಗಿರುತ್ತದೆ ಎಂದು ತಿಳಿಸುತ್ತದೆ.
ಕನ್ನಡಿ ಯಾರದಾದರೇನು? ರೂಪ ಮುಖ್ಯ ಅಲ್ವ. ಈ Podcast,ಮನುಷ್ಯ ತನ್ನ ಜೀವನದ ಕಷ್ಟದ ಸಮಯದಲ್ಲಿ ದುಡುಕಿ ಕೆಟ್ಟ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾನೆ. ಆದರೆ ಆ ಕಷ್ಟಕ್ಕೆ ಪರಿಹಾರವನ್ನ ಆ ಭಗವಂತ ಒಂದಲ್ಲ ಒಂದು ರೂಪದಲ್ಲಿ ನಮಗೆ ನೀಡುತ್ತಾನೆ ನಾವು ಅದನ್ನ ಸ್ವೀಕರಿಸಬೇಕು ಎಂದು ತಿಳಿಸುತ್ತದೆ.
ಆಲದ ಮರದಲ್ಲಿ ಕುಂಬಳಕಾಯಿನಾ? ಈ Podcast, ಮನುಷ್ಯ ಜೀವನದಲ್ಲಿ ಜಾಣ್ಮೆಯನ್ನ ಉಪಯೋಗಿಸಬೇಕು.ಜಾಣ್ಮೆ ಇಲ್ಲದ ಜೀವನ ತುಂಬ ಕಷ್ಟಕರವಾಗಿರುತ್ತೆ ಮತ್ತು ಜೀವನದ ಗುರಿಯನ್ನ ತಲುಪುವುದಕ್ಕೆ ಸಾಧ್ಯವಾಗದಿರಬಹುದು ಎಂದು ತಿಳಿಸುತ್ತದೆ.ಆ ಭಗವಂತ ಕೂಡ ತನ್ನ ಸೃಷ್ಟಿಯಲ್ಲಿ ಜಾಣ್ಮೆಯನ್ನ ಉಪಯೋಗಿಸಿದ್ದಾನೆ ಹಾಗಾಗಿ ಆತನೇ ಸೃಷ್ಟಿಸಿದಂತ ನಾವು ಜಾಣ್ಮೆಯಿಂದ ಜೀವನವನ್ನ ನಡೆಸಬೇಕು ಎಂದು ತಿಳಿಸುತ್ತದೆ.
ಮಣ್ಣಿನ ಗೋಡೆಗೆ ನೀರನ್ನ ಹಾಕಬೇಡಿ.  ಈ Podcast, ಅವಗುಣಗಳನ್ನ ಅಂದ್ರೆ ಕೆಟ್ಟ ಗುಣಗಳನ್ನ ಹೊಂದಿರುವ ಮನುಷ್ಯನನ್ನ ಸರಿಪಡಿಸೋದು ಕಷ್ಟದ ಕೆಲಸ ಅಥವಾ ಅಸಾಧ್ಯದ ಕೆಲಸ. ಅದು ಮಣ್ಣಿನ ಗೋಡೆಗೆ ನೀರು ಹಾಕಿದಂತೆ ವ್ಯರ್ಥ ಪ್ರಯತ್ನ. ಆದ್ರೆ ಮನುಷ್ಯನಲ್ಲಿರುವ ಅವಗುಣಗಳು ಅಂದ್ರೆ ಕೆಟ್ಟ ಗುಣಗಳನ್ನ ಮನುಷ್ಯ ಭಗವಂತನ ಮೊರೆ ಹೋಗಿ ತೆಗೆದುಹಾಕಬೇಕು ಎಂದು ತಿಳಿಸುತ್ತದೆ.
ಹದ ತಪ್ಪಿದರೆ ಅಕ್ಕಿ ನುಚ್ಚಾಗುತ್ತೆ. ಈ ವಿಡಿಯೋ, ಮನುಷ್ಯನ ಜೀವನ ಹದವಾಗಿರಬೇಕು, ಹದ ಅಂದ್ರೆ ಒಳ್ಳೆಯ ವಿಚಾರಗಳಿಂದ ಕೂಡಿರಬೇಕು ಹದ ತಪ್ಪಿ ಜೀವನ ಮಾಡಿದರೆ ಅಂದ್ರೆ ಒಳ್ಳೆಯ ವಿಚಾರಗಳನ್ನ ಬಿಟ್ಟು ಕೆಟ್ಟ ವಿಚಾರಗಳನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಹದ ತಪ್ಪುತ್ತೆ ಮತ್ತು ಅದಕ್ಕೆ ತಕ್ಕ ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ ಎಂದು ತಿಳಿಸುತ್ತದೆ.
ಭಗವಂತನ ಹೆಜ್ಜೆ ಮೇಲೆ ನಮ್ಮ ಹೆಜ್ಜೆ ಹೇಗೆ ?How is our step on the steps of God? ಈ ವಿಡಿಯೋ , ಭಗವಂತನ ಇರುವಿಕೆ ಮತ್ತು ನಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳು ಮತ್ತು ಪ್ರಾಮಾಣಿಕ ಕೆಲಸಗಳಿಗೆ ಆ ಭವಂತನ ದಾರಿ ತೋರಿಸುತ್ತಾನೆ ಮತ್ತು ಮುನ್ನಡೆಸುತ್ತಾನೆ ಅಂದ್ರೆ ಆ ಭಗವಂತನ ಹೆಜ್ಜೆ ಮೇಲೆ ನಮ್ಮ ಹೆಜ್ಜೆಯನಿಟ್ಟು ನೆಡೆದರೆ ಖಂಡಿತ ನಾವು ಜೀವನದ ಯಶಸ್ಸಿನ ದಡ ತಲುಪುತ್ತೀವಿ ಎಂದು ತಿಳಿಸುತ್ತದೆ.
ನಾನೇ..ನಾನೇ..ನಾನೇ.. ಎಂಬುವುದನ್ನ ಅಳಿಸುವುದಕ್ಕೆ ಪರದೆ ಕಟ್ಟಿ.Draw a curtain to erase me. ಈ Podcast , ನಮ್ಮಲ್ಲಿ ಇರುವಂತಹ "ನಾನು" ಅಥವಾ "ನಾನೇ" ಎಂಬ ವಿಚಾರವನ್ನ ಅಳಿಸಿಹಾಕುವಲ್ಲಿ ಮತ್ತು ದಾನದ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ದಾನದ ನಿಜವಾದ ಸ್ವರೂಪ ಇಲ್ಲ ಎಂಬ ಸತ್ಯವನ್ನ ತಿಳಿಸುತ್ತದೆ.ದಾನದ ನಿಜವಾದ ಸ್ವರೂಪ ತಿಳಿದು ದಾನಮಾಡಿದಲ್ಲಿ ಆ ಭಗವಂತ ನಮ್ಮನ್ನ ಸದಾ ಕಾಲ ಕೈ ಹಿಡಿದು ಇನ್ನೂ ಎತ್ತರಕ್ಕೆ ಕೊಂಡೈಯುತ್ತಾನೆ ಎಂದು ತಿಳಿಸುತ್ತದೆ.
ಈ Podcast , ಬಿದಿರಲ್ಲಿ ಇರುವಂತಹ ಬಾಗುವಿಕೆ ಅಂದ್ರೆ ವಿನಯತೆಯ ಬಗ್ಗೆ ತಿಳಿಸುತ್ತದೆ. ಬಿದಿರು ಎಲ್ಲ ಹಂತದಲ್ಲೂ ಎಲ್ಲರಿಗು ಉಪಯೋಗವಾಗುತ್ತದೆ ಕಾರಣ ಅದರ ಬಾಗುವಿಕೆ ಗುಣ. ಹಾಗೆ ಮನುಷ್ಯನು ಕೂಡ ಬಾಗುವಿಕೆ ಅಂದ್ರೆ ವಿನಯತೆಯಿಂದ ಕೂಡಿದ್ದರೆ ಆತ ಉನ್ನತ ಮಟ್ಟಕ್ಕೆ ತಲುಪುವುದಕ್ಕೆ ಸಾಧ್ಯ. ಮತ್ತು ಬಾಗದವರನ್ನ ಆ ಭಗವಂತ ಮೆಚ್ಚುವುದಿಲ್ಲ ಎಂದು ತಿಳಿಸುತ್ತದೆ.
ಈ Podcast, ಮನುಷ್ಯನ ಬಾಯುಪಚಾರ ಹೇಗೆ ತನ್ನ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡುತ್ತೆ ಮತ್ತು ಹೇಗೆ ಮನುಷ್ಯ ಬಾಯುಪಚಾರ ಮಾಡಿದಲ್ಲಿ ತನ್ನ ಸಂಬಂಧಗಳನ್ನು  ಕಳೆದುಕೊಳ್ಳುತ್ತಾನೆ ಹಾಗು ತನ್ನ ಘನತೆಯನ್ನೂ ಕಳೆದುಕೊಳ್ಳುತ್ತಾನೆ ಎಂದು ತಿಳಿಸುತ್ತದೆ.
ಈ Podcast, ಒಬ್ಬ ಮನುಷ್ಯ ತನ್ನ ಭಕ್ತಿಯನ್ನು ಭಗವಂತನಲ್ಲಿ ಅರ್ಪಿಸುವುದಕ್ಕೆ ಬೇಕಾದಂತಹ ಯೋಗ್ಯತೆಯನ್ನು ಅಥವಾ ಅರ್ಹತೆಯನ್ನ ತಿಳಿಸುತ್ತದೆ ಅಂದರೆ ನಾವು ಹೇಗೆ  ಟ್ಯಾಕ್ಸ್ ಅಂತ ಕಟ್ಟುತಿವೋ ಹಾಗೇನೆ ಭಗವಂತನಲ್ಲಿ ಅರ್ಪಿಸುವದಕ್ಕೂ ಕೂಡ ನಾವು ಟ್ಯಾಕ್ಸ್ ಅನ್ನ ಕಟ್ಟಬೇಕಾಗುತ್ತದೆ ಇಲ್ಲಿ ಟ್ಯಾಕ್ಸ್ಟ್ಯಾ ಅಥವಾ ಸುಂಕ ಅಂದ್ರೆ  ದಾಸೋಹ.ಜಂಗಮರಿಗೆ ದಾಸೋಹ ಮಾಡುವುದರ ಮುಖೇನ ನಮ್ಮ ಭಕ್ತಿಯನ್ನು ಭಗವಂತನಲ್ಲಿ ಅರ್ಪಿಸಬಹುದು ಎಂಬುದನ್ನ ತಿಳಿಸುತ್ತದೆ
loading
Comments